
ಸಂಪಾದಕರು, ಸಾಹಿತ್ಯ ವಾಹಿನಿ
ಮನು ಗುರುಸ್ವಾಮಿ ಕನ್ನಡದ ಯುವ ಬರಹಗಾರರು, ಅಧ್ಯಾಪಕರು ಮತ್ತು ಸಂಘಟಕರು. ಇವರ ಹುಟ್ಟೂರು ಮೈಸೂರು ಜಿಲ್ಲೆಯ ತಲಕಾಡು ಸಮೀಪದ ಪರಿಣಾಮಿಪುರ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕೆ ಎಲ್ ಇ ಸಂಸ್ಥೆಯ ಎಸ್ ನಿಜಲಿಂಗಪ್ಪ ಕಾಲೇಜು ಬೆಂಗಳೂರಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಯಲಹಂಕದ ಬೃಂದಾವನ ಸಮೂಹ ವಿದ್ಯಾಸಂಸ್ಥೆಯಲ್ಲಿಯೂ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಬಾಪೂಜಿ ಶಿಕ್ಷಣ ಸಂಸ್ಥೆಯ ಡಾ.ಶಾಮನೂರು ಶಿವಶಂಕರಪ್ಪ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಕಟಿತ ಕೃತಿಗಳು : ನಿಬ್ಬೆರಗು, ಅವಳೂ ಕತೆಯಾದಳು, ಕಲ್ಲುದೇವರು ದೇವರಲ್ಲ, ವ್ಯಭಿಚಾರಿ ಹೂವು, ನಿನ್ನ ಇಚ್ಛೆಯಂತೆ ನಡೆವೆ
ಅಪ್ರಕಟಿತ ಕೃತಿಗಳು: ಗಾಂಧೀ ನೀ ನನ್ನ ಕೊಂದೆ, ಅಪ್ಪನ ಅಂಗಡಿ, ಮೈಮನ ಮಾರಿಕೊಂಡವರು
ರೂವಾರಿ : ಕುವೆಂಪು ಪುಸ್ತಕ ಮನೆ, ಸಾಹಿತ್ಯ ಸಂಚಾರ, ಸಾಹಿತ್ಯ ವಾಹಿನಿ ಹಾಗೂ ವಾಟ್ಸಪ್ ಸಾಹಿತ್ಯ ಪತ್ರಿಕೆ, ಒಂದೆರಡು ಸಾಲು
Copyright © 2026 Sahitya vahini - All Rights Reserved.
Powered by GoDaddy
We use cookies to analyze website traffic and optimize your website experience. By accepting our use of cookies, your data will be aggregated with all other user data.