
ದಯಾನಂದ. ಬಿ. ಆರ್ ಅವರು ಮೂಲತಃ ದಾವಣಗೆರೆಯವರು. ದ ರಾ.ಬಳೆಗಾರ್ ಎಂಬುದು ಇವರ ಕಾವ್ಯನಾಮ. ಹವ್ಯಾಸಿ ಬರಹಗಾರರಾಗಿರುವ ಇವರು ಕಥೆ, ಕವಿತೆ, ಚುಟುಕು, ಲೇಖನಗಳ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ.

ಸಂಪಿಗೆ ವಾಸು ಕಾವ್ಯನಾಮದಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ವಾಸುದೇವ ಶೆಟ್ಟಿ ಅವರು ಮೂಲತಃ ಬಳ್ಳಾರಿಯವರು. ಕಾಲೇಜಿನ ದಿನಗಳಿಂದಲೂ ಓದುವ ಬರೆಯುವ ಹವ್ಯಾಸವಿಟ್ಟುಕೊಂಡಿದ್ದ ವಾಸುರವರು ಪ್ರಸ್ತುತ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಬಸವಂತಪ್ಪ ಹ ವಾಲಿಕಾರ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಹುಲಸಗೇರಿ ಗ್ರಾಮದವರು. ಪೋಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಕಥೆ, ಕವಿತೆ, ಚುಟುಕುಗಳನ್ನು ಬರೆಯುವುದರ ಕಡೆಗೂ ಹೆಚ್ಚು ಒಲವಿದೆ.

ನಾಗರಾಜ ಗಣಪತಿ ನಾಯ್ಕ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬಾಡ ಗ್ರಾಮದವರು.
ವೃತ್ತಿಯಲ್ಲಿ ವಾಣಿಜ್ಯ ತೆರಿಗೆ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ನಾಗರಾಜ ಜಿ ಎನ್ ಬಾಡ ಎಂಬ ಕಾವ್ಯನಾಮದಿಂದ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.

ಮಹಾಂತೇಶ ಹು ಮುದುಗಲ್ ಅವರು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಗ್ರಾಮದವರು. ಕಳೆದ 27 ವರುಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಸದ್ಯ ಎಎಸ್ಐ ಆಗಿ ಬಾಗಲಕೋಟೆಯಲ್ಲಿ ನೆಲೆಸಿದ್ದಾರೆ.

ಶ್ರೀಮತಿ ಜಿ ಎಸ್ ಗಾಯತ್ರಿ ಅವರು ವೃತ್ತಿಯಲ್ಲಿ ಕನ್ನಡ ಭಾಷಾ ಶಿಕ್ಷಕಿ. ಹರಿಹರದ ಶ್ರೀಮತಿ ಹಾಲಮ್ಮ ಶಾಮನೂರು ಶಿವಪ್ಪ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಒಲವನ್ನು ಹೊಂದಿದ್ದಾರೆ. ಇವರ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದವರಾದ ಪವಿತ್ರ ಮಹದೇವಪ್ಪ ಅವರು ವೃತ್ತಿಯಲ್ಲಿ ಪಿಯು ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ. ಪ್ರವೃತ್ತಿಯಲ್ಲಿ ಉದಯೋನ್ಮುಖ ಬರಹಗಾರ್ತಿಯಾಗಿದ್ದಾರೆ.

ನವೀದ್ ಮುಲ್ಲಾ ಮೂಲತಃ ಹುಬ್ಬಳ್ಳಿ ಅವರು. ಸುಮಾರು ೨೫ ವರ್ಷಗಳಿಂದ ಅಮನ್ ಫೌಂಡೇಶನ್ ಎಂಬ ಎನ್.ಜಿ.ಓ ಮೂಲಕ ಸಮಾಜ ಸೇವೆಯ ಜತೆ ಜತೆಗೆ, ಸಾಹಿತ್ಯ ಕೃಷಿ ಮಾಡಿಕೊಂಡು ಬಂದಿದ್ದಾರೆ.
'ಕಾವ್ಯ ಕಸ್ತೂರಿ' ಇವರ ಮೊದಲ ಕವನ ಸಂಕಲನ. ಕಾವ್ಯಸುಧೆ ಕೃತಿ ಪ್ರಕಟಣಾ ಹಂತದಲ್ಲಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿ ಹಲವು ಸಂಘ-ಸಂಸ್ಥೆಗಳು ನೀಡುವ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಗಣಪತಿ ಕೊಂಡದಕುಳಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು. ಎಂ ಎ, ಬಿಎಡ್ ಪದವೀಧರರಾದ ಇವರು ವೃತ್ತಿಯಲ್ಲಿ ಸಗಟು ವ್ಯಾಪಾರಿ.
ಬರವಣಿಗೆ, ಯಕ್ಷಗಾನ, ತಾಳಮದ್ದಳೆಯಲ್ಲಿ ಆಸಕ್ತಿ ಹೊಂದಿರುವ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ.
ಕೃತಿಗಳು : ಬದುಕು ಬರೆಯುವ ಮುನ್ನ, ಬೇರು ಬಿಳಲು, ಮರುಳ ಮನುಜನ ಮರ್ಮರ, ದೇವದೀಪ

ಎಸ್ ವಿ ಶಾಂತಕುಮಾರ ಅವರು ಮೂಲತಃ ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮದವರು.
ವೃತ್ತಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿರ್ವಾಹಕರಾಗಿದ್ದರೆ, ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರ. ರಂಗಭೂಮಿ ಅಭಿನಯದಲ್ಲೂ ಇವರಿಗೆ ಹೆಚ್ಚಿನ ಆಸಕ್ತಿ.
ಕೃತಿಗಳು : ಕನಸು ಚಿಗುರೊಡೆಯಿತು, ಕನಸಿನ ಕಡಲು, ಬಣ್ಣದ ಲೋಕ, ಸಹಜ
ಪ್ರಶಸ್ತಿಗಳು : ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಕೆಎಸ್ಆರ್ಟಿಸಿ ನಿಗಮದಲ್ಲಿ ಬೆಳ್ಳಿಪದಕವನ್ನು ಪಡೆದಿದ್ದಾರೆ. ಶಾಂತಕುಮಾರ ಪಲ್ಲಾಗಟ್ಟಿ

ಹಮೀದಾ ಬೇಗಂ ದೇಸಾಯಿ ಅವರು ಮೂಲತಃ ಬೆಳಗಾವಿಯವರು.
ಎಂಎ, ಬಿಇಡ್ ಪದವೀಧರರು. ನಿವೃತ್ತ ಅಧ್ಯಾಪಕರು.
ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಹಾಗೂ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯರು.
ಕೃತಿಗಳು : ನುಡಿಮುತ್ತುಗಳು, ಮನೋಗೀತೆ, ವಚನಾಂಜಲಿ, ಬೇಗಂ ಗಜ಼ಲ್ ಗುಚ್ಛ
ಪ್ರಶಸ್ತಿಗಳು : ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಡಾ.ಸ.ಜ.ನಾಗಲೋಟಿಮಠ ರಾಜ್ಯ ಪ್ರಶಸ್ತಿ, ಜನಗಣತಿ ಕಾರ್ಯಕ್ಕಾಗಿ ಭಾರತ ಸರ್ಕಾರದ ರಜತ ಪ್ರಶಸ್ತಿ, ಭಾರತ ಸರ್ಕಾರದ ಅತ್ಯುತ್ತಮ ಶಿಕ್ಷಕಿ ರಾಷ್ಟ್ರ ಪ್ರಶಸ್ತಿ, ಕುವೆಂಪು ರಾಜ್ಯ ಪ್ರಶಸ್ತಿ, ಸಿರಿಗನ್ನಡ ರಾಜ್ಯ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.

ಅಶ್ವಿನಿ ಜಿ ಎಸ್ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದ ಕುಂದಗನ್ನಡದವರು. ಪ್ರಸ್ತುತ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿಯಾಗಿದ್ದಾರೆ. ಕನ್ನಡ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ವೆಂಕಮ್ಮ ಗಾಂವಕರ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯವರು. ಸದ್ಯ ನಿವೃತ್ತ ಶಿಕ್ಷಕಿ. ಜೊತೆಗೆ ದಾಂಡೇಲಿಯ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೃತಿಗಳು : ಹೆಜ್ಜೆಯ ಗುರುತು, ರಮಣ

ರಾಜೇಂದ್ರ ಎಂ ಹಿರೇಮಠ ಅವರು ಮೂಲತಃ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆ, ಜತ್ತ ತಾಲ್ಲೂಕಿನ ಉಟಗಿಯವರು.
ವೃತ್ತಿಯಲ್ಲಿ ಪ್ರೌಢ ಶಾಲಾ ಶಿಕ್ಷಕರು.
ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರರು. ಫೋಟೋಗ್ರಾಫಿ, ವಿಡಿಯೋಗ್ರಾಫಿ ಕೂಡ ಇವರ ಆಸಕ್ತಿ ಕ್ಷೇತ್ರಗಳು.
ಜತ್ತ ತಾಲ್ಲೂಕು ಮಟ್ಟದ ಲಾಯನ್ಸ ಆದರ್ಶ ಶಿಕ್ಷಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಸಿಂಧು ಭಾರ್ಗವ ಅವರು ಹಲವು ವರುಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಸ್ನೇಹ ಸೌಗಂಧ ಇವರ ಪ್ರಕಟಿತ ಕೃತಿ. ಹೊನ್ನತಂತಿ, ನವಿಲ ಹೆಜ್ಜೆ, ಕೌಸ್ತುಭ, ಬೆಟ್ಟದ ಹಾದಿಯಲ್ಲಿ, ಕೂಸುಮರಿ ಇವರ ಸಂಪಾದಿತ ಕೃತಿಗಳು.
ಬತ್ತದ ತೊರೆ ಸ್ನೇಹ ಬಳಗ ರೂವಾರಿ. ಕನ್ನಡ ಸಾಹಿತ್ಯ ಪರಿಷತ್ತು ಸೇರಿ ಹಲವು ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ.

ನಿರ್ಮಲಾ ಆನಂತ ಹೆಗಡೆ ಸಂಪೇಗದ್ದೆ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಒಲವಿರುವ ಇವರು ಹಲವಾರು ಸಣ್ಣಕಥೆಗಳನ್ನು ಬರೆದಿದ್ದಾರೆ.


Copyright © 2026 Sahitya vahini - All Rights Reserved.
Powered by GoDaddy
We use cookies to analyze website traffic and optimize your website experience. By accepting our use of cookies, your data will be aggregated with all other user data.